Warning: Creating default object from empty value in /nfs/c03/h02/mnt/56080/domains/logos.nationalinterest.in/html/wp-content/themes/canvas/functions/admin-hooks.php on line 160

займ на карту онлайнонлайн займы

Tag Archives | kannada-concepts

ದೇಶಕ್ಕಾದ ನಷ್ಟ ಗೊತ್ತೇ

Kannada translation of the blog post “Cost of a non-functioning parliament” appeared in Prajavani on 21st August 2015.

CM5uUXMUcAA4U0j

Comments { 0 }

Opportunity Cost

ಹಿಂದಿನ ಅಂಕಣದಲ್ಲಿ scarcity, trade-off ಹಾಗು innovation ಬಗ್ಗೆ ಬರೆದಿದ್ದೆ, ಈಗ trade-off ಮಾಡುವಾಗ ನಾವು ಯಾವ ಆಧಾರದ ಮೇಲೆ ಮಾಡಬೇಕು ಎಂದು ಗಮನಿಸೋಣ. ಮೊದಲು ಒಂದು ಕಾಲ್ಪನಿಕ ಸ್ಥಿತಿಯನ್ನು ಕಲ್ಪಿಸಿಕೊಳ್ಳೋಣ. ಮಂಜುನಾಥನು ತನ್ನ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವನು, ಆತನಿಗೆ “ಮಾಹಿವ್ಯವಸ್ಥೆ Technologies”ನಲ್ಲಿ ಒಂದು ಕೆಲಸ ದೊರಕಿದೆ, ಇಲ್ಲಿ ಒಂದು ವರ್ಷಕ್ಕೆ ೪ ಲಕ್ಷ ರುಪಾಯಿ ಸಂಬಳ . ಇದರೊಟ್ಟಿಗೆ ಜಾಂಬಿಯ  ದೇಶದಲ್ಲ್ಲಿಸ್ನಾತಕೋತ್ತರ(post – graduate) ಪದವಿ ಓದಲು ಸ್ಥಾನ ದೊರಕಿದೆ. ನೀವು ಮಂಜುನಾಥನ ಸ್ಥಿತಿಯಲ್ಲಿ ಯಾವುದನ್ನು ಆಯ್ಕೆ ಮಾಡುತ್ತಿದ್ದಿರಿ?

ಈ ಪ್ರಶ್ನೆಯ ಉತ್ತರವನ್ನು ನೋಡುವ ಮುನ್ನ, ಅರ್ಥಶಾಸ್ತ್ರದ ಒಂದು ಸಾಮಾನ್ಯ ನಿಯಮವನ್ನ ಅರ್ಥೈಸಿಕೊಳ್ಳೋಣ

Optimisation principle — ಮನುಷ್ಯನು ತನಗೆ ಇರುವ ಸೀಮಿತ ಸಂಪನ್ಮೂಲಗಳಲ್ಲಿ, ಯಾವುದು ಶ್ರೇಷ್ಠವೋ ಅದನ್ನೇ ಆಯ್ದುಕೊಳ್ಳುವ ಪ್ರಯತ್ನ ಮಾಡುವನು.

ಸಾಮಾನ್ಯವಾಗಿ ಅರ್ಥಶಾಸ್ತ್ರದ ಅಧ್ಯಯನದಲ್ಲಿ ಇದನ್ನು ನಾವು ನಿಜವೆಂದು ಭಾವಿಸಿ ಮುಂದುವರೆಯುತ್ತೇವೆ . ಮನುಷ್ಯನು ಇಷ್ಟೊಂದು ಆದರ್ಶ ಜೀವನ ನಡೆಸುವನೆಂದಲ್ಲ ಇದರ ಅರ್ಥ, ಇದು ಕೇವಲ ಅಧ್ಯಯನದ ಸರಳತೆಗಾಗಿ ಮಾಡಿಕೊಂಡ ಊಹೆ*.ಯಾವುದೇ ಒಂದು ವಿಷಯವನ್ನ ನಾವು first-principlesನಿಂದ ಓದಲು ಹೊರಟರೆ, ಹೀಗೆ ಹಲವಾರು ideal assumptions ಮಾಡಬೇಕು. ಇದರಿಂದಲೇ ನಾವು ವಿಷಯವೆಂಬ ಕಟ್ಟಡದ  ಪಾಯ ಕಟ್ಟಲು ಸಾಧ್ಯ.

“ಏನೋ ಒಂದು ವಸ್ತು ಬೇಕಾದರೆ ಅದಕ್ಕೆ ಪರ್ಯಾಯವಾಗಿ ಮತ್ತೊಂದು ವಸ್ತುವನ್ನು ತ್ಯಜಿಸುವೆವು. ಇದನ್ನೇ ಅರ್ಥಶಾಸ್ತ್ರಜ್ಞರು (economists) “trade-off” ಎಂದು ಕರೆಯುತ್ತಾರೆ.  ತ್ಯಜಿಸುವ ವಸ್ತು ಹಣವಿರಬಹುದು, ಸಮಯವಿರಬಹುದು ಅಥವ ನೈಜ ಸ್ವರೂಪದ ವಸ್ತುವೇ ಆಗಿರಬಹುದು.” ಎಂದು ಹಿಂದಿನ ಅಂಕಣದಲ್ಲಿ ನೋಡಿದ್ದೆವು. ಹೀಗಿದ್ದಲ್ಲಿ ನಾವು ಯಾವುದಾದರು ವಿಷಯದಲ್ಲಿ trade-off ಮಾಡಬೇಕಾದರೆ, ಆ trade-offನಿಂದ ನಮಗೆ ಒಳ್ಳೆಯದನ್ನೇ ಆಯ್ದುಕೊಳ್ಳುವುದು optimisation principleಗೆ ಅನುಗುಣವಾಗಿದೆ. ಆದರೆ trade-off ಮಾಡುವಾಗ ಏನನ್ನು ಪರಿಗಣಿಸಬೇಕು? ಸಾಧಾರಣವಾಗಿ ನಾವು ಕೇವಲ ಮೊತ್ತ(price) ನೋಡಿ ನಿರ್ಧರಿಸುತ್ತೇವೆ, ಇದು ಒಳ್ಳೆಯದೇ, ಆದರೆ ನಾವು ಮೊತ್ತವನ್ನ ತುಲನಾತ್ಮಕವಾಗಿ ನೋಡಬೇಕು . ಹೀಗೆ ನೋಡುವಾಗ “opportunity cost” ನಮಗೆ ಅದರ ಉತ್ತರವನ್ನ ನೀಡುತ್ತದೆ .

“Opportunity cost” ಎಂದರೆ ನಾವು ಒಂದನ್ನ ಪಡೆಯಲು ಇನ್ನೋದನ್ನು ತ್ಯಜಿಸಿರುವ ವಸ್ತುವಿನ  ಮೌಲ್ಯ. ಈ ಅಂಕಣವನ್ನ ಬರೆಯಲು ಸುಮಾರು ೧ ಘಂಟೆ ವಿನಿಯೋಗವಾಗಿರಬಹುದು, ಈ ಸಮಯದಲ್ಲಿ ಒಂದು tv ಕಾರ್ಯಕ್ರಮವನ್ನು ನೋಡಬಹುದಿತ್ತು,  ಅದನ್ನ ನೋಡುವಾಗ ಸಿಗುವ ಲಾಭ(ಅಥವ ಹಿತ)ವೇ ಈ ಅಂಕಣ  ಬರೆಯುಯುವುದರ “Opportunity cost”.

ನಾವು ಯಾವುದೇ ಕಾರ್ಯ ಚಟುವಟಿಕೆ ನಡೆಸಿದರೂ ಅದಕ್ಕೆ “opportunity cost” ಇರುವುದು. ಹೀಗೆ ಯೋಚಿಸುವುದು ಮೊದಲಿಗೆ ಸ್ವಲ್ಪ  ಕಷ್ಟವಾಗಬಹುದು, ಆದರೆ ಹೀಗೆ ಯೋಚನೆ ಮಾಡಿದರೆ ನಾವು ಉತ್ತಮ trade-off ಗಳನ್ನ ಪಡೆಯಬಹುದು. ಮತ್ತೊಂದು ಸರಳ ಉದಾಹರಣೆ: ಒಬ್ಬ ಗಣಿತ ಹಾಗು ವಿಜ್ಞಾನದ ವಿದ್ಯಾರ್ಥಿಯು ಸಮಯವನ್ನ ಕೇವಲ ವಿಜ್ಞಾನವನ್ನು ಓದಲು ವಿನಿಯೋಗಿಸಿದರೆ, ಗಣಿತವು opportunity cost ಆಗುತ್ತದೆ. ಹೀಗೆಯೇ Opportunity costನ  ತತ್ವವನ್ನು ಮನಸ್ಸಿನಲ್ಲಿಟ್ಟುಕೊಂಡು ಮಂಜುನಾಥನು(ಮೊದಲ ಪ್ಯಾರ) ಏನು ಮಾಡಬಹುದು ಎಂದು ಓದುಗರು commentನೀಡಬೇಕೆಂದು ಇಲ್ಲಿ ಯಾಚಿಸುತ್ತೇನೆ.  ಇದರೊಂದಿಗೆ  opportunity cost, ideal assumption ಇತ್ಯಾದಿ ಆಂಗ್ಲಪದಗಳ ಸರಳ ಕನ್ನಡ ಅನುವಾದನ್ನು ತಿಳಿದಿದ್ದಲ್ಲಿಯೂ commentಮಾಡುವುದಾಗಿ  ಕೇಳಿ ಕೊಳ್ಳುತ್ತೇನೆ.

 

ವರುಣ ರಾಮಚಂದ್ರ ತಕ್ಷಶಿಲಾ ಸಂಸ್ಥಾನದಲ್ಲಿ ನೀತಿ ವಿಶ್ಲೇಷಕ. Twitterನಲ್ಲಿ  @_quale

 

* ನಾವು ಬಹಳಷ್ಟುಸಲ ಹೀಗೆ ವರ್ತಿಸುವುದಿಲ್ಲ. ಮನುಷ್ಯನು ಈ ತರಹದ ಆದರ್ಶಗಳನ್ನ ಪಾಲಿಸುವುದಿಲ್ಲವೆಂದೇ ಅರ್ಥಶಾಸ್ತ್ರಜ್ಞರು behavioural economics ಎಂಬ ವಿಷಯದ ಮೇಲೆ ಸಂಶೋಧನೆ ನಡೆಸುತ್ತಾರೆ

 

 

Comments { 0 }

ಅಭಾವ – ಅರ್ಥಶಾಸ್ತ್ರದ ಮೊದಲ ಪಾಠ

The first lesson of economics is scarcity: there is never enough of anything to fully satisfy all those who want it. The first lesson of politics is to disregard the first lesson of economics.

– Thomas Sowell

ಇತ್ತೀಚಿಗೆ ದೆಹಲಿ ಸರ್ಕಾರವು ೪೦೦ ಯುನಿಟ್ ವಿದ್ಯುತ್ ಹಾಗು ೨೦,೦೦೦ ಲೀಟರ್ ನೀರನ್ನು ಉಚಿತವಾಗಿ ನೀಡುವ ಘೋಷಣೆ ಮಾಡಿತು. ಇದು ಒಳ್ಳೆಯ ನೀತಿಯೋ ಅಲ್ಲವೋ? ನಾವು ದಿನನಿತ್ಯ ಈ ತರಹದ ಹಲವಾರು ಆರ್ಥಿಕ ಸುದ್ಧಿಗಳನ್ನ ಓದುತ್ತೇವೆ, ಈ ಸುದ್ಧಿಗಳ ಬಗ್ಗೆ ನಮ್ಮೆಲ್ಲರಿಗೂ ಏನಾದರೂ ಒಂದು ಅಭಿಪ್ರಾಯವೂ ಇರುತ್ತದೆ, ಆದರೆ ಈ ಅಭಿಪ್ರಾಯದ ಹಿಂದೆ ಧೃಢವಾದ ವಿದ್ವತ್ತು ಇರುವುದು ಬಹಳ ಕಡಿಮೆ.  ಕೇವಲ ಪ್ರೌಢ ಶಾಲೆಯವರೆಗೆ  ಓದು-ಬರಹ ಮಾಡಿದ್ದರೂ ಒಬ್ಬ ಕ್ರಿಕೆಟಿಗನ ಬ್ಯಾಟ್ಟಿಂಗ್ ಸರಾಸರಿಯನ್ನು(Average)  ನೋಡಿದರೆ ನಮಗೆ ಸಹಜವಾಗಿಯೇ ಅದರ(ಸರಾಸರಿಯ) ಅರ್ಥ ತಿಳಿಯುವುದು ಆದರೆ ಅರ್ಥಶಾಸ್ತ್ರ(Economics)ದ  ಬಗ್ಗೆ ನಮ್ಮ ಜ್ಞಾನವು ಅಷ್ಟು  ಸ್ಪುಟವಾಗಿಲ್ಲ.  ಇದಕ್ಕೆ ನಮ್ಮ ಶಾಲೆಗಳಲ್ಲಿ  ನಾವು ಅರ್ಥಶಾಸ್ತ್ರವನ್ನ ಕಡೆಗಣಿಸಿರುವುದೇ ಕಾರಣ. ಅರ್ಥಶಾಸ್ತ್ರವೆಂದೊಡನೆ ನಾವು ಮೊದಲ ಪಂಚವರ್ಷೀಯ ಯೋಜನೆ, ಎರಡನೆ ಪಂಚವರ್ಷೀಯ ಯೋಜನೆ ಇತ್ಯಾದಿಗಳಬಗ್ಗೆ ಓದುತ್ತೇವೆ.  ನಿಜಹೇಳಬೇಕೆಂದರೆ ಇದು ಅರ್ಥ ಶಾಸ್ತ್ರವಲ್ಲ, ಇದು ಅರ್ಥ ಶಾಸ್ತ್ರದ ಇತಿಹಾಸ (Economic History). ಅರ್ಥಶಾಸ್ತ್ರದ ಮೂಲಭೂತ ತತ್ವಗಳನ್ನು ಕ್ರಮವಾಗಿ ಓದುವುದು ಗಣಿತ, ವಿಜ್ಞಾನ ಹಾಗು ಭಾಷೆಗಳನ್ನು ಓದುವಷ್ಟೇ ಮುಖ್ಯ.

ಅರ್ಥಶಾಸ್ತ್ರದ ಮೊದಲ ಪಾಠ “ಅಭಾವ ”(Scarcity). ನಮ್ಮ ಜಗತ್ತಿನಲ್ಲಿ ಸಂಪನ್ಮೂಲಗಳ(resources) ಅಭಾವ  ಅನಾದಿಕಾಲದಿಂದಲೂ ಇದೆ. ಸಂಪನ್ಮೂಲಗಳ ಅಭಾವ  ಇದ್ದರೂ ನಮಗೆ ಅನಂತ ಬಯಕೆಗಳು(infinite wants).ಈ ಅಭಾವ -ಬಯಕೆಗಳ ಬಗ್ಗೆ ಯೋಚಿಸುವ ಗುಣ ಮಹತ್ವಾಕಾಂಕ್ಷೆಯುಳ್ಳ ಮನುಷ್ಯನ ಲಕ್ಷಣ. ಹೀಗಿರುವಾಗ, ಮನುಷ್ಯನು ಅಭಾವದ ಸಮಸ್ಯೆಯನ್ನು ಹೇಗೆ ಬಗೆಹರೆಸಿರುವನು? ನಮಗೆ ಅರಿವಿಲ್ಲದೆಯೇ ನಾವು ಈ ಸಮಸ್ಯೆಯನ್ನು ಪರಿಹರಿಸುತ್ತಿದ್ದೇವೆ, ಏನೋ ಒಂದು ವಸ್ತು ಬೇಕಾದರೆ ಅದಕ್ಕೆ ಪರ್ಯಾಯವಾಗಿ ಮತ್ತೊಂದು ವಸ್ತುವನ್ನು ತ್ಯಜಿಸುವೆವು. ಇದನ್ನೇ ಅರ್ಥಶಾಸ್ತ್ರಜ್ಞರು (economists) “trade-off” ಎಂದು ಕರೆಯುತ್ತಾರೆ.  ತ್ಯಜಿಸುವ ವಸ್ತು ಹಣವಿರಬಹುದು, ಸಮಯವಿರಬಹುದು ಅಥವ ನೈಜ ಸ್ವರೂಪದ ವಸ್ತುವೇ ಆಗಿರಬಹುದು. ಗಮನವಿರಲಿ ಇದು ಅಧುನಿಕ ಸಮಾಜದ ಕಥೆಯಲ್ಲ, ನಮಗೆ ಹಿಂದೆಯೂ ಸಂಪನ್ಮೂಲಗಳ ಅಭಾವ ಇತ್ತು ಮುಂದೆಯೂ ಇರುತ್ತದೆ.

ಅಭಾವವು ವ್ಯಾಪಕವಾಗಿ ಹರಡಿರುವ ಕಾರಣದಿಂದಲೇ ನಮ್ಮಲ್ಲಿ ಸ್ಪರ್ಧಾತ್ಮಕಭಾವನೆಯೂ ಬಂದಿರುವುದು. ನಮಗೆ ಬೇಕಾದುದನ್ನು ನಾವು ಪಡೆಯಬೇಕೆಂದರೆ ಇನ್ನು ಹಲವಾರು ಜನರನ್ನ ಮೀರಿಸಿಯೇ ಪಡೆಯಬೇಕು, ಇದು ಪ್ರಕೃತಿಯ ನಿಯಮ.    ಈ ಸ್ಪರ್ಧಾತ್ಮಕಭಾವವು ಕಠೊರವೆನಿಸಬಹುದು, ಆದರೆ ನಾವು ನಮ್ಮ ಸುತ್ತಮುತ್ತಲ ಜನರನ್ನ ಹಾಗು ಅವರ ನಡೆಯನ್ನ  ಗಮನಿಸಿದರೆ ಇದರ ಬಹಳಷ್ಟು ಉದಾಹರಣೆಗಳು ಗೋಚರವಾಗುವುದು.  ಈ ನಿಟ್ಟಿನಲ್ಲೇ ನಾವು innovation ಕಡೆ ಸದಾ ಗಮನ ವಹಿಸುತ್ತೇವೆ. ಸಣ್ಣಪುಟ್ಟ ಸುಧಾರಣೆಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ. ನಡೆಯಲು ಕಷ್ಟವೆಂದು ಗಾಲಿಯನ್ನು(wheel) ಕಂಡುಹಿಡಿದೆವು , ಗಾಲಿಯಿಂದ ಸೈಕಲ್, ಸೈಕಲಿನಿಂದ ಮೋಟರ್ ಸೈಕಲ್ ಹೀಗೆಯೇ ಮಂಗಳ ಗೃಹವನ್ನೇ ತಲುಪುವಷ್ಟು ಮುಂದುವರೆದಿದ್ದೇವೆ.

ಹೀಗೆ  tradeoff ಹಾಗು innovation ಅಭಾವದ ಸಮಸ್ಯೆಗೆ  ಹಿಂದೆಯೂ ಸಹಾಯ ನೀಡಿದೆ, ಮುಂದೆಯೂ ನೀಡುತ್ತದೆ

Footnote – tradeoff ಹಾಗು innovation ಬಗ್ಗೆ ಮತ್ತೊಂದು ಉದಾಹರಣೆ : ಸುಮಾರು ೨೦ ವರ್ಷಗಳ ಹಿಂದೆ ಯಾವುದಾದರು ಪುಸ್ತಕ ಅಥವಾ ವ್ಯಕ್ತಿಯ ಬಗ್ಗೆ ತಿಳಿಯಬೇಕಿದ್ದರೆ ಗ್ರಂಥಾಲಯಕ್ಕೆ ಹೋಗಿ ಹುಡುಕಿ ನಂತರ ಓದಬೇಕಿತ್ತು(ಇಲ್ಲಿ ನಾವು ಜ್ಞಾನಕ್ಕೆ, ಸಮಯದ trade-off ಮಾಡುತ್ತಿದ್ದೆವು) ಆದರೆ ಈಗ ತಂತ್ರಜ್ಞಾನವು ಎಷ್ಟು ಮುಂದುವರೆದಿದೆಯೆಂದರೆ ವಿಕಿಪೀಡಿಯ ಮೂಲಕ ನಿಮಿಷಗಳಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಪಡೆಯಬಹುದು. ಈಗ ಮಾಹಿತಿಯು ಸುಲಭವಾಗಿ ದೊರೆಯುತ್ತದೆ, ಆದರೆ ಮಾಹಿತಿಯ ಮಿತಿ ಎಷ್ಟರ ಮಟ್ಟಕ್ಕೆ(information overload) ಬೆಳೆದಿದೆಯೆಂದರೆ ನಮಗೆ ಮಾಹಿತಿಯನ್ನು ಗೃಹಿಸಲು ಕಷ್ಟವಾಗುತ್ತಿದೆ.

ವರುಣ ರಾಮಚಂದ್ರ ತಕ್ಷಶಿಲಾ ಸಂಸ್ಥಾನದಲ್ಲಿ ನೀತಿ ವಿಶ್ಲೇಷಕ. Twitterನಲ್ಲಿ  @_quale

 

Comments { 2 }