Warning: Creating default object from empty value in /nfs/c03/h02/mnt/56080/domains/logos.nationalinterest.in/html/wp-content/themes/canvas/functions/admin-hooks.php on line 160

займ на карту онлайнонлайн займы

ಭಾರತದ ಸಂವಿಧಾನ ಹಾಗು ಸಾಮಾಜಿಕ ಕ್ರಾಂತಿ

ಜನವರಿ ೨೬, ೧೯೫೦ ರಂದು ಸ್ವತಂತ್ರ ಭಾರತದ ಸಂವಿಧಾನ ಜಾರಿಗೆ ಬಂದಿತು. ಸಂವಿಧಾನದ ಅನೇಕ ಗುಣಗಳ ಬಗ್ಗೆ  ನಾವು ಕೇಳಿದ್ದೇವೆ ಆದರೆ ಸಂವಿಧಾನದ ರಚನಕಾರರು ಸಂವಿಧಾನದ ಮೂಲಕ ಸಾಮಾಜಿಕ ಕ್ರಾಂತಿಯನ್ನು ತರಲು ಹೊರಟ್ಟಿದ್ದರು, ಇಂದಿಗೂ ಇದೊಂದು ಅದ್ವಿತೀಯ ಪ್ರಯೋಗ.  ‘ಕ್ರಾಂತಿ’ ಹಾಗು ‘ಸಂವಿಧಾನ’ವೆಂಬ ಪದಗಳು ಒಂದು ತರಹದ ವಿರೋಧಾಭಾಸವನ್ನು ಕಲ್ಪಿಸುತ್ತವೆ. ಕ್ರಾಂತಿಯೆಂದೊಡನೆ ನಮ್ಮ ಮನಸ್ಸಿನಲ್ಲಿ ಘರ್ಷಣೆ, ಪ್ರತಿಭಟನೆ ಇತ್ಯಾದಿ ಚಿತ್ರಗಳು ಬಿಂಬಿತವಾಗುತ್ತದೆ . ಸಂವಿಧಾನವೆಂದಾಗ ವಿಚಾರ-ವಿನಿಮಯ, ವಿವೇಚನೆ ಈ ತರಹದ ಮೃದು ಪ್ರವೃತ್ತಿಗಳ  ಕಲ್ಪನೆ ಬರುತ್ತದೆ.  ಆದರೆ ಈ ಬಗೆಯ ಸಾಂವಿಧಾನಿಕ ಕ್ರಾಂತಿಯೊಂದನ್ನು ತರಲು ಯತ್ನಿಸಿವುದೇ  ನಮ್ಮ ಸಂವಿಧಾನದ ಅನನ್ಯ ಲಕ್ಷಣವಾಗಿದೆ. ಸಂವಿಧಾನಕರ್ತರು  ಕ್ರಾಂತಿಯನ್ನು  ಆರ್ಥಿಕ ಹಾಗು ಸಮಾಜೋದ್ಧಾರದ  ಮೂಲಕ ತರಲು ಯತ್ನಿಸಿದರು. ಈ ಲೇಖನವು ಸಮಾಜೋದ್ಧಾರದ ಮೂಲಕ ಕ್ರಾಂತಿಯನ್ನು ತರುವ ಪ್ರಯತ್ನದ ಬಗ್ಗೆ ಹೇಳಲು ಹೊರಟಿದೆ.

ಭಾರತದಲ್ಲಿ ಸ್ವಾತಂತ್ರ್ಯ ದೊರಕುವ ಮುನ್ನವೇ ಅನೇಕ ಮಹಾಜನರು ಸಮಾಜ ಸುಧಾರಣೆ ಹಾಗು ಸಮಾಜಕಲ್ಯಾಣದ ಕಡೆ ಒತ್ತು ನೀಡಿದ್ದರು.ಆದರೆ ಸಂವಿಧಾನದ ಮೂಲಕ ರಾಜ್ಯವು (the state)ಸಮಾಜ ಸುಧಾರಣೆಯ ಹೊಣೆಯನ್ನು ಹೊರಲಾರಂಬಿಸಿತು(ಪ್ರಾಯಶಃ ಇದರಿಂದಾಗಿಯೇ ಸ್ವಾತಂತ್ರ್ಯದ ಈಚೆಗೆ ನಾವು ಮಹಾನ್ ಸಮಾಜ ಸುಧಾರಕರನ್ನು ಕಂಡಿಲ್ಲ?). ಈ ತರಹದ ಹೊಣೆ ಹೊರುವುದು ಕೇವಲ ಕಷ್ಟಮಾತ್ರವಲ್ಲ ಇದೊಂದು ಅಪಾಯಕಾರಿಯಾದ ಸಂಗತಿಯೂ ಕೂಡ,ಏಕೆಂದರೆ

  • ಸಾವಿರಾರು ವರ್ಷಗಳಿಂದ  ಅವರವರ  ಚೌಕಟ್ಟಿನಲ್ಲಿ ಬದುಕ್ಕಿದ್ದ  ಜನರಿಗೆ  ಒಂದು  ಸಂವಿಧಾನವು “ಇದು ಹೀಗೆ” “ಅದು ಹಾಗೆ”  ಎಂದು ಹೇಳುವುದನ್ನು ಸ್ವೀಕರಿಸುವುದು ಕಷ್ಟವಾಗಬಹುದಿತ್ತು. ಅದರಲ್ಲೂ ಜಾತಿ, ಮತ ಇತ್ಯಾದಿ ವಸ್ತುವಿಷಯಗಳ ಬಗ್ಗೆ ಸಂವಿಧಾನದ ನಿರ್ದೇಶತ್ವವನ್ನು  ಸ್ವಿಕಾರ ಮಾಡುವುದು  ಇನ್ನೂ ದೊಡ್ಡ ಸವಾಲು. ಇಂದಿಗೂ ಈ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇವೆ, ಸವಾಲುಗಳನ್ನು ನಾವು ಒಂದಲ್ಲ ಒಂದು ರೀತಿಯಲ್ಲಿ ಎದುರಿಸುತ್ತಲೇ ಇದ್ದೇವೆ.
  • ಒಂದು ಅಂಶದ ಬಗ್ಗೆ ಅಸ್ವೀಕೃತಿ ಇದ್ದಮೇಲೆ, ಸಂವಿಧಾನದ ಬೇರೊಂದು ಅಂಶದಮೇಲೆ ಪ್ರಶ್ನೆ ಬರುವುದೂ  ಸಹಜವೆ. ಹೀಗಿದ್ದಾಗ ಇಡೀ  ಸಂವಿಧಾನವೇ ಅಸ್ವೀಕಾರವಾಗುವ ಸಾಧ್ಯತೆ ಇರುತ್ತದೆ. ಖಾಪ್ ಪಂಚಾಯತದ ಸದಸ್ಯರು ಹೀಗೆಯೇ ಸಂವಿಧಾನವನ್ನು ಪ್ರಶ್ನಿಸುತ್ತಾರೆ, ಅವರ ಮಾಪದಂಡಕ್ಕೆ  ತಕ್ಕಂತೆ ಅವರ ಜನರು ಬದುಕಬೇಕೆಂದು ಅಪೇಕ್ಷಿಸುತ್ತಾರೆ, ಹೀಗಿರುವ  ಹಕ್ಕು ಅವರಿಗೆ ಇದೆಯೇ? ಪ್ರಾಯಶಃ ಇದೆ, ಆದರೆ ಅವರು ಅವರ ನಿಯಮ   ಪಾಲನೆಯಾಗಬೇಕೆಂದು ಅಪೇಕ್ಷಿಸುವುದಲ್ಲದೆ ಅದನ್ನ ಪಾಲಿಸದಿರುವವರಿಗೆ (ಹಾಗು ಅವರ ಅಧಿಕಾರವನ್ನು ಸ್ವೀಕರಿಸದಿರುವವರಿಗೆ) ಕ್ರೂರ ದಂಡವನ್ನು ನೀಡುತ್ತಾರೆ.
  • ಅಮೇರಿಕಾ, ಬ್ರಿಟನ್ ನಂತಹ ದೇಶದ ಸಂವಿಧಾನವು ಕೇವಲ ಕಾನೂನಿನ ಚೌಕಟ್ಟಿನ ನಕ್ಷೆಯನ್ನು ನೀಡಿ ಜನರ ಸ್ವಾತಂತ್ರ್ಯವನ್ನು ಕಾಪಾಡುತ್ತದೆ.  ಇದೇ ಒಂದು ಮಹತ್ತರವಾದ ಕರ್ತವ್ಯ, ಇದರೊಡನೆ  ಸಮಾಜ ಸುಧಾರಣೆಯೂ ಸೇರಿಸಿದರೆ  ಕರ್ತವ್ಯದ ಮೇರೆ ಇನ್ನಷ್ಟು ಬೆಳೆಯುತ್ತದೆ.  ಈ ಜವಾಬ್ದಾರಿಯನ್ನು  ಪೂರೈಸಲು  ಸಾಧ್ಯವಾಗದಿದ್ದಲ್ಲಿ ರಾಜ್ಯದ ಮೇಲೆ ಬೇಜವಾಬ್ದಾರಿ ತನದ ಆರೋಪ ಹೂಡುವ ಸಾಧ್ಯತೆಯೂ  ಹೆಚ್ಚಾಗುತ್ತದೆ.  ಹೀಗಾದಲ್ಲಿ ಸಂವಿಧಾನದ ನ್ಯಾಯಸಮ್ಮತತೆ (legitimacy), ಸ್ವೀಕೃತಿ, ಹಾಗು ಅಸ್ತಿತ್ವವೇ ಪ್ರಶ್ನೆಗೊಳಗಾಗುತ್ತದೆ.

ಒಟ್ಟಿನಲ್ಲಿ ಸುಮಾರು ೬೫ ವರ್ಷದ ಇತಿಹಾಸವನ್ನು ನಾವು ಗಮನಿಸಿದರೆ, ಸಾಂವಿಧಾನಿಕ  ಕ್ರಾಂತಿಯನ್ನು ಸಂಪೂರ್ಣವಾಗಿ ಗಳಿಸಿಲ್ಲವಾದರೂ ತಕ್ಕ ಮಟ್ಟಿಗೆ ಯಶಸ್ಸನ್ನೇ ಪಡೆದಿದೆ. ಮೂಲಭೂತ ಹಕ್ಕುಗಳು ಎಲ್ಲಾ  ಪ್ರಜೆಗಳಿಗೂ ಇದೆ. ಇದಕ್ಕೆ ವಿರುದ್ದವಾಗಿ   ಮಾವೊವಾದ, ಖಾಪ್ ಪಂಚಾಯತ್ ತರಹದ ದುರಾದೃಷ್ಟಕರವಾದ ಪ್ರತಿಭಟನೆಗಳನ್ನೂ ನಾವು ಕಂಡಿರುವೆವು.  ಈ ಸಂಧರ್ಭದಲ್ಲಿ ನಾವು ಸಂವಿಧಾನ ಶಿಲ್ಪಿ ಡಾ।ಭೀಮ್ ರಾವ್ ಅಂಬೇಡ್ಕರ್ ಅವರ ಅವಿಸ್ಮರಣೀಯ ಮಾತುಗಳನ್ನ ಸ್ಮರಿಸಬೇಕು.  “(…)however good a Constitution may be, it is sure to turn out bad because those who are called to work it, happen to be a bad lot. However bad a Constitution may be, it may turn out to be good if those who are called to work it, happen to be a good lot. The working of a Constitution does not depend wholly upon the nature of the Constitution. The Constitution can provide only the organs of State such as the Legislature, the Executive and the Judiciary. The factors on which the working of those organs of the State depend are the people and the political parties they will set up as their instruments to carry out their wishes and their politics. Who can say how the people of India and their parties will behave? Will they uphold constitutional methods of achieving their purposes or will they prefer revolutionary methods of achieving them? If they adopt the revolutionary methods, however good the Constitution may be, it requires no prophet to say that it will fail. It is, therefore, futile to pass any judgement upon the Constitution without reference to the part which the people and their parties are likely to play” ಭಾಷಾಂತರ ಗೊಳಿಸಿದರೆ ಎಲ್ಲಿ ಅದರ ಸ್ವಾರಸ್ಯವು ಕಳೆದುಹೋಗುವುದೋ ಎಂಬ ಭಯದಿಂದ ಆಂಗ್ಲಭಾಷೆಯಲ್ಲೇ ಆಯ್ದ ಭಾಗವನ್ನು ಇಲ್ಲಿ ನೀಡಿರುವೆನು.

 

 

 

, , , ,

No comments yet.

Leave a Reply